ಸೊನಾಕ್ಷಿ ಸಿನ್ಹಾ ರವರು (೨ ಜೂನ್ ೧೯೮೭) ಭಾರತೀಯ ಚಲನಚಿತ್ರ ನಟಿ . ಇವರು ನಟ ಶತ್ರುಘ್ನ ಸಿನ್ಹಾ ಮತ್ತು ಪೂನಮ್ ಸಿನ್ಹಾ ರವರ ಪುತ್ರಿ . ತನ್ನ ಆರಂಭಿಕ ಜೀವನದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಇವರು ೨೦೧೦ ದಬಂಗ್ ಸಿನಿಮಾದಲ್ಲಿ ರಜ್ಜೋ ಪಾಂಡೆ ಎಂಬ ಪಾತ್ರದಲ್ಲಿ ನಟಿಸಿ , ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಡೆಬ್ಯೂಟ್ ಫೀಮೇಲ್ ಪ್ರಶಸ್ತಿಯನ್ನು ಪಡೆದರು . ಸಿನ್ಹಾ ರವರು ರೌಡಿ ರಾಥೋರ್ (೨೦೧೨), ಸನ್ ಆಫ್ ಸರ್ದಾರ್ (೨೦೧೨) , ದಬಂಗ್ ೨ (೨೦೧೨) , ಹಾಲಿಡೇ : ಎ ಸೋಲ್ಜಲ್ ಈಸ್ ನೆವರ್ ಆಫ್ ಡ್ಯೂಟಿ (೨೦೧೪) ರ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಸಿನ್ಹಾ ರವರು ಇಮ್ರಾನ್ ಖಾನ್ ರವರ ಲೆಟ್ಸ್ ಸೆಲೆಬ್ರೇಟ್ ಹಾಡಿನಲ್ಲಿ ಸಣ್ಣ ಭಾಗವನ್ನು ಹಾಡಿದ್ದಾರೆ . ಹಾಗೂ ತನ್ನದೇ ಚಿತ್ರಗಳಲ್ಲಿ ಒಟ್ಟು ನಾಲ್ಕು ಹಾಡುಗಳನ್ನು ಹಾಡಿದ್ದಾರೆ. == ಜನನ == ಸೊನಾಕ್ಷಿ ರವರು ೨ ಜೂನ್ ೧೯೮೭ ರಂದು ಭಾರತದ ಪಟ್ನಾ ದಲ್ಲಿ ಜನಿಸಿದರು . == ಜೀವನ == ಸೊನಾಕ್ಷಿ ಸಿನ್ಹಾ ರವರ ತಂದೆ - ಶತ್ರುಘ್ನ ಸಿನ್ಹಾ , ತಾಯಿ - ಪೂನಮ್ ಸಿನ್ಹಾ ಇಬ್ಬರೂ ಬಾಲಿವುಡ್ ನ ಖ್ಯಾತ ನಟ ಮತ್ತು ನಟಿ . ಸೊನಾಕ್ಷಿ ರವರ ತಂದೆ ಈಗ ಭಾರತೀಯ ಜನತಾ ಪಕ್ಷದ ರಾಜಕೀಯ ಸದಸ್ಯರಾಗಿದ್ದಾರೆ. ಸೊನಾಕ್ಷಿ ಯವರಯ ಮೂವರು ಮಕ್ಕಳಲ್ಲಿ ಕಿರಿಯರಾಗಿದ್ದು ಅವರ ಇಬ್ಬರು ಹಿರಿಯ ಸಹೋದರರು ಲವ್ ಸಿನ್ಹಾ ಮತ್ತು ಖುಷ್ ಸಿನ್ಹಾ ಅವಳಿ ಮಕ್ಕಳು. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರ್ಯ ವಿದ್ಯಾ ಮಂದಿರ್ ನಲ್ಲಿ ಪೂರ್ಣಗೊಳಿಸಿದ ನಂತರ ಫ್ಯಾಷನ್ ಡಿಸೈನಿಂಗ್ ನಲ್ಲಿ ಪದವಿಯನ್ನು ಪಡೆದರು. == ವೃತ್ತಿಜೀವನ == ಸಿನ್ಹಾ ಇವರು ೨೦೦೫ ರಲ್ಲಿ ಮೇರಾ ದಿಲ್ ಲೇಕೆ ದೇಖೋ ಎಂಬ ಚಿತ್ರದಲ್ಲಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿ, ವೇಷಭೂಷಣ ವಿನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೨೦೧೦ ರಲ್ಲಿ ಬಿಡುಗಡೆಯಾದ ದಬ್ಬಂಗ್ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಸಲ್ಮಾನ್ ಖಾನ್ ಎದುರು ನಟಿಸಿದ್ದಾರೆ. ಇದು ೨೧೦೦ ರ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು ಮತ್ತು ಅಂತಿಮವಾಗಿ ಸಾರ್ವಕಾಲಿಕ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಸಿನ್ಹಾ ಇವರು ೨೦೧೨ ರಲ್ಲಿ ನಾಲ್ಕು ಚಿತ್ರದ ಬಿಡುಗಡೆಗಳನ್ನು ಹೊಂದಿದ್ದರು. ಅದರಲ್ಲಿ ಮೊದಲ ಚಿತ್ರ ಪ್ರಭುದೇವರ ರೌಡಿ ರಾಥೋಡ್.ಇದರಲ್ಲಿ ಸೊನಾಕ್ಷಿ ಅಕ್ಷಯ್ ಕುಮಾರ್ ಎದುರು ನಟಿಸಿದ್ದಾರೆ. ಅವರ ಮುಂದಿನ ಚಿತ್ರ, ಶಿರೀಶ್ ಕುಂದರ್ ಅವರ ಜೋಕರ್ . ಇದರಲ್ಲೂ ಸೊನಾಕ್ಷಿ ಅಕ್ಷಯ್ ಕುಮಾರ್ ಎದುರು ನಟಿಸಿದ್ದಾರೆ . ಅವರ ಮೂರನೆಯ ಚಿತ್ರ, ಅಶ್ವ್ನಿ ಧೀರ್ ಅವರ ಸನ್ ಆಫ್ ಸರ್ದಾರ್. ಇದರಲ್ಲಿ ಸೊನಾಕ್ಷಿ ಅಜಯ್ ದೇವ್ ಗನ್ ಎದುರು ನಟಿಸಿದ್ದಾರೆ. ಸಿನ್ಹಾ ರವರ ೨೦೧೩ ರ ಮೊದಲ ಚಿತ್ರ ವಿಕ್ರಮಾದಿತ್ಯ ಮೋಟ್ವಾನೆ ಅವರ ಲುಟೇರಾ.ಇದರಲ್ಲಿ ಸೊನಾಕ್ಷಿ ರಣ್ವೀರ್ ಸಿಂಗ್ ಎದುರು ನಟಿಸಿದ್ದಾರೆ. == ಫಿಲ್ಮೋಗ್ರಾಫಿ == == ಡಿಸ್ಕೋಗ್ರಾಫಿ == == ಟಿ.ವಿ ಪ್ರದರ್ಶನಗಳು == == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಗ್ಯಾಲರಿ == == ಉಲ್ಲೇಖಗಳು ==